ನಿಯತ್ತಿನ ನಾಯಿ

ಬಹಳ ಚೂಟಿಯು 
ನಮ್ಮ ಪುಟ್ಟನು
ಬೇಸರ ಕಳೆಯಲು
ನಾಯಿಯ ಸಾಕಿದನು

ಟಾಮಿ ಎಂದು ಮುದ್ದು
ನಾಯಿಯ ಹೆಸರು
ನಿಯತ್ತೆ ಆಗಿಹುದು
ನಾಯಿಯ ಉಸಿರು

ಒಡೆಯನಿಗಾಗಿ
ಕೊಡುವುದು ಪ್ರಾಣ
ಮಾಡದು ಎಂದೂ
ನಂಬಿಕೆಯ ಹರಣ

ಕ್ಷಣವೂ ಬಿಡದೆಯೆ
ಮನೆಯ ಕಾಯುವುದು
ಹಾಕಿದ ತುಂಡು
ರೊಟ್ಟಿಯ ತಿನ್ನುವುದು

ನಿಯತ್ತು ಬಿಡದು
ಮೂಕ ಪ್ರಾಣಿ
ಸಾಕಿದ ಒಡೆಯನಿಗೆ
ಎಂದೆಂದೂ ಋಣಿ

ವೇದಾವತಿ ಭಟ್ಟ 
ಮುಂಬೈ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಮೃಗಾಲಯ

ಪಾಪು ಮತ್ತು ಕನ್ನಡಿ