ಪಾಪು ಮತ್ತು ಕನ್ನಡಿ

ವಿಷಯ : ಕನ್ನಡಿಯೊಳಗೆ ತನ್ನ ಬಿಂಬ ಕಂಡ ಕಂದಮ್ಮ

ಶೀರ್ಷಿಕೆ : ಪಾಪು ಮತ್ತು ಕನ್ನಡಿ

ನಮ್ಮಯ ಮನೆಯಲಿ
ಇರುವದೊಂದು ಪಾಪು
ಪಾಪುವಿನ ಮುದ್ದಾದ
ಸುಂದರ ಹೆಸರು ಗೋಪು

ಗುಳಿಕೆನ್ನೆಯ, ಹಾಲುನಗೆ
ಗೆಜ್ಜೆನಾದದ ಪುಟಾಣಿ
ಮನೆಯಲಿ ಎಲ್ಲರ
ಮನಗೆದ್ದ ಕಣ್ಮಣಿ

ಅಂಬೆಗಾಲಿಕ್ಕಿ ಕೋಣೆ
ಸೇರಿ ನೋಡಿತು ಕನ್ನಡಿ
ಮೊದಲ ಅನುಭವಕೆ
ಸಂತಸವಾಯ್ತು ಇಮ್ಮಡಿ

ತನ್ನ ಬಿಂಬವನೇ ನೋಡಿ
ಹಾಕಿತು ಕುಣಿದು ಕೇಕೇ
ಮುಟ್ಟಿ ನೋಡುವ
ಸಂಭ್ರಮ ಕೇಳಬೇಕೇ!!

ಬಾಲ ಭಾಷೆಯಲೇ
ಶುರು ಸಂಭಾಷಣೆ
ಇಣುಕಿ ನೋಡುವ
ಸಂಭ್ರಮಕಿಲ್ಲ ಕೊನೆ

ಕನ್ನಡಿಯು ಸೋತಿತು
ಪಾಪುವನು ಕಂಡು
ಹಿಗ್ಗಿ ಅಮ್ಮ ಕೊಟ್ಟಳು
ಸಿಹಿಯ ತುಂಡು

ವೇದಾವತಿ ಭಟ್ಟ
ಮುಂಬೈ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಮೃಗಾಲಯ