ಮೃಗಾಲಯ
ಶೀರ್ಷಿಕೆ : ಮೃಗಾಲಯ
ನಮ್ಮೂರಿನ ರೈಲನು ಬೇಗನೇ ಎರೋಣ
ಮೈಸೂರಿನ ಮೃಗಾಲಯಕೆ ಹೋಗೋಣ
ಜಿಂಕೆ, ಆನೆ, ಕರಡಿಯ ನೋಡೋಣ
ಹುಲಿ, ಸಿಂಹದ ಘರ್ಜನೆ ಕೆಳೋಣ
ಉದ್ದ ಕತ್ತಿನ ಜಿರಾಫೆಯ ನೋಡು
ಆಫ್ರಿಕದ ದೊಡ್ಡ ಆನೆಯ ನೋಡು
ಬಣ್ಣಬಣ್ಣದ ಗರಿಯ ನವಿಲಿಗಿದು ತಾಣ
ಇಹುದು ಗಿಳಿ, ಕೋಗಿಲೆ, ಹಂಸ, ಕಾಜಾಣ
ನೀರಲಿ ಮೀನಿನ ಆಟವು ಮಜವು
ಅಬ್ಬಾ! ಮೊಸಳೆಯು ಭಯಂಕರವು
ಮೈ ಜುಂ ಎನ್ನುವ ಬಗೆ ಬಗೆ ಹಾವು
ಸುತ್ತಲೂ ಇಹುದು ಹಸಿರಿನ ವನವು
ಮಂಗ, ಚಿಂಪಾಂಜಿ, ಕುದುರೆ, ಗೋರಿಲ್ಲಾ
ಬಗೆ ಬಗೆಯ ಜೀವಿಗಳು ಇಲ್ಲೆ ಇಹುದಲ್ಲಾ
ಕಸಿದಿಹೆವು ಬಂಧಿಸಿ ಇವುಗಳ ಸ್ವಾತಂತ್ರ
ಪಂಜರದ ಜೀವಿಗಳಿವು ಎಂದೂ ಪರತಂತ್ರ
ಮನರಂಜನೆ ಹೆಸರಲಿ ಮಾಡದಿರಿ ಶೋಷಣೆ
ಆಹಾರ ನೀರು ನೀಡಿ ಮಾಡಿ ಪೋಷಣೆ
ವೇದಾವತಿ ಭಟ್ಟ
ಮುಂಬೈ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ