ಚಂದಿರ
ಚಂದಿರ ಚಂದಿರನಲ್ಲಿಗೆ ಹೋಗುವ ಬಾರಮ್ಮ ಚಂದದ ಊರನು ನೋಡುವ ಬಾರಮ್ಮ ಸುಂದರ ತಾರಾಲೋಕವ ನೋಡಮ್ಮ ಅಂದದಲಿ ಕೈಯ ತುತ್ತನು ಕೊಡಮ್ಮ ಎಷ್ಟು ದೊಡ್ಡ ನೋಡು ಹುಣ್ಣಿಮೆ ಚಂದಿರ!! ನೋಡಲು ಕಣ್ಣಿಗೆ ಬಹಳವೇ ಸಡಗರ ದಿನವೂ ಬಾರನು ಇದುವೇ ಬೇಸರ ಕೇಳಿದರೆ ಚಂದಮಾಮ ಹೇಳನು ಉತ್ತರ!! ತಿಂಗಳ ಬೆಳಕದು ಬಹಳವೇ ಸುಂದರ ಕಂಗಳಿಗೆ ಇದುವೇ ತಂಪಿನ ಮಂದಾರ ಮಂಗಳನಿಗೂ ಇದ ನೋಡಲು ಕಾತರ ಸಂಗಮವಾಗಿದೆ ಚೆಲುವಿನ ಹಂದರ ಚಂದದ ಚಂದಿರನ ನೋಡವ ಬಾರೆ ಅಂದದ ತಾರೆಯ ಜೊತೆಗೆ ತೋರೆ ಬಂದಿತು ಅಮ್ಮ ನನ್ನಯ ಕಣ್ಣಿಗೆ ನಿದಿರೆ ಸುಂದರವು ಚಂದ್ರನ ಬೆಳಕಲಿ ಈ ಧರೆ