ನೀತಿ ಪಾಠ
ಬೇಗ ಏಳು ಮಗುವೇ
ಸ್ನಾನವ ಮಾಡಿ ಸಿದ್ಧನಾಗು
ನೀನು ಶಾಲೆಗೆ ಹೊರಡು
ಜಾಣ ವಿದ್ಯಾರ್ಥಿಯಾಗು
ಗುರುಗಳ ಪಾಠವ
ಶ್ರದ್ಧೆಯಿಂದಲಿ ಕೇಳು
ಕೇಳಿದ ಪ್ರಶ್ನೆಗೆ ಉತ್ತರ
ಲಘುಬಗೆಯಲಿ ಹೇಳು
ಗಾದೆಯ ಮಾತಿದೆ ಮಗುವೇ
ಜಾಣನಿಗೆ ಮಾತಿನ ಪೆಟ್ಟು
ಆದರೆ ಕೋಣನಿಗೆ ಬೇಕು
ಉರಿಯುವ ಬೆತ್ತದ ಪೆಟ್ಟು
ನೀತಿ ಕಥೆಗಳ ಕೇಳುತ
ನೀತಿವಂತನಾಗಿ ಬಾಳು
ಹಿರಿಯರ ಮಾತನು
ಗೌರವದಿಂದ ಕೇಳು
ಸಹಪಾಠಿಗಳೊಡನೆ
ಸ್ನೇಹವನು ತೋರು
ಎಲ್ಲರೊಳಗೆ ಒಂದಾಗಿ
ಒಳ್ಳೆಯದನು ಕೋರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ