ನನ್ನ ಕನಸು



ಸಮವಸ್ತ್ರವ ಧರಿಸಿ ಶಿಸ್ತಿನಿಂದಲಿ
ತಪ್ಪದೆ ದಿನವೂ ಶಾಲೆಗೆ ಹೋಗುವೆನು
ಗುರುಗಳು ಹೇಳುವ ಪಾಠವ ಕೇಳಿ
ಮನೆ ಪಾಠವನು ಮುಗಿಸುವೆನು

ದೇಶವ ಕಾಯುವ ಸೈನಿಕನಾಗುವ
ನನ್ನ ಕನಸಿಗಾಗಿ ದಿನವೂ ಓದುವೆನು
ಶಾಲೆಯಲಿ ನಡೆಯುವ ಪರೀಕ್ಷೆಯಲಿ
ಒಳ್ಳೆಯ ಅಂಕವನು ಗಳಿಸುವೆನು

ಸ್ನಾನವ ಮಾಡಿ ತಲೆಯನು ಬಾಚಿ
ಶಿಸ್ತನು ನಾನು ಪಾಲಿಸುವೆನು
ಉಗುರುಗಳನು ಕತ್ತರಿಸಿತಲಿ
ಸ್ವಚ್ಛತೆಯನು ಕಾಪಾಡುವೆನು

ಅಮ್ಮನು ಕೊಡುವ ಹಾಲು ಕುಡಿದು
ಭೀಮನಂತೆ ಗಟ್ಟಿಯಾಗುವೆನು
ಸಮಯಕೆ ಸರಿಯಾಗಿ ಊಟವ
ಮಾಡಿ ಆರೋಗ್ಯವಂತನಾಗುವೆನು

ಸಹಪಾಠಿಗಳೊಡನೆ ನಿತ್ಯವೂ
ಕುಣಿಯುತ ಆಟವನು ಆಡುವೆನು
ಭಾರತ ಮಾತೆಯ ಸೇವೆಯ
ಮಾಡುವ ಸೈನಿಕನಾಗುವೆನು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಪಾಪು ಮತ್ತು ಕನ್ನಡಿ

ಮೃಗಾಲಯ