ನನ್ನ ಪುಟ್ಟ ಮಗುವೇ
ಓ ನನ್ನ ಪುಟ್ಟ ಮಗುವೇ
ನನ್ನ ಬಾಳ ನಗುವೇ
ಒಮ್ಮೆ ಇಲ್ಲಿ ಬಂದು ನೋಡು
ಇಲ್ಲಿದೆ ಪುಟ್ಟ ಹಕ್ಕಿ ಗೂಡು
ಇಹುದು ಎರಡು ಮರಿಗಳು
ಎಷ್ಟು ಸುಂದರ ಅವುಗಳು
ಕೆಂಪು ಕೊಕ್ಕದು ಬಹಳ ಸುಂದರ
ಮೈಯು ಬಣ್ಣದ ಗರಿಗಳ ಹಂದರ
ತಾಯಿ ತರುವ ಗುಟುಕಿಗಾಗಿ
ಕಾದು ಕುಳಿತಿರುವವು ಬೆಚ್ಚಗೆ
ಚಿಂವ್ ಚಿಂವ್ ಎಂದು ಕೂಗುವವು
ಪುಟ್ಟ ಮರಿಗಳೆಲ್ಲ ಕುಳಿತು ಒಟ್ಟಿಗೆ
ವೇದಾವತಿ ಭಟ್ಟ
ಚಿಂವ್ ಚಿಂವ್ ಎಂದು ಕೂಗುವವು
ಪುಟ್ಟ ಮರಿಗಳೆಲ್ಲ ಕುಳಿತು ಒಟ್ಟಿಗೆ
ವೇದಾವತಿ ಭಟ್ಟ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ