ವೃಷಭ ಪ್ರಾಸ - ಶಿಶುಗೀತೆ

ಚಂದಿರ

ಚಂದಿರನಲ್ಲಿಗೆ ಹೋಗುವ ಬಾಮ್ಮ
ಚಂದದ ಊರನು ನೋಡುವ ಬಾಮ್ಮ
ಸುಂದರ ತಾರಾಲೋಕವ ನೋಡಮ್ಮ
ಅಂದದಲಿ ಕೈಯ ತುತ್ತನು ಕೊಡಮ್ಮ

ತಿಂಗಳ ಬೆಳಕದು ಬಹಳವೇ ಸುಂದರ
ಕಂಗಳಿಗೆ ಇದುವೇ ತಂಪಿನ ಮಂದಾರ
ಮಂಗಳನಿಗೂ ಇದ ನೋಡಲು ಕಾತರ
ಸಂಗಮವಾಗಿದೆ ಚೆಲುವಿನ ಹಂದರ

ಚಂದದ ಚಂದಿರನ ನೋಡವ ಬಾರೆ
ಅಂದದ ತಾರೆಯ ಜೊತೆಗೆ ತೋರೆ
ಬಂದಿತು ಅಮ್ಮ ನನ್ನ ಕಣ್ಣಿಗೆ ನಿದಿರೆ
ಸುಂದರವು ಚಂದ್ರನ ಬೆಳಕಲಿ ಈ ಧರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಪಾಪು ಮತ್ತು ಕನ್ನಡಿ

ಮೃಗಾಲಯ