ಆಹಾರ



ಮಗುವೆ ಕೇಳು ಪೌಷ್ಟಿಕ
ಆಹಾರದ ಹಿರಿಮೆಯನು
ಅರಿತು ಸೇರಿಸಿದರೆ
ರೋಗಗಳು ದೂರವು

ಹೊಟ್ಟೆಗೆ ಆಹಾರವಿಲ್ಲದೆ
ಹಸಿದಿರುವರು ಹಲವರು
ಆಹಾರದ ಮಹತ್ವ ಅರಿಯದೆ
ಅನ್ನವ ಚೆಲ್ಲುವರು ಹಲವರು  

ಹಿತ-ಮಿತವಾಗಿ ಸೇವಿಸು
ಆಹಾರವನು ಎಂದಿಗೂ
ಅನಗತ್ಯವಾಗಿ ಹಾಕಿಸಿ
ಚೆಲ್ಲದಿರು ಎಂದೆಂದಿಗೂ

ನಾರು-ನೀರು ಬೇಕೇ ಬೇಕು
ನಮ್ಮ ನಿತ್ಯದ ಆಹಾರದಲಿ
ಸೊಪ್ಪು-ತರಕಾರಿ, ಕಾಳುಗಳಿಗೆ
ಊಟದಲಿ ಪ್ರಾಮುಖ್ಯತೆ ಇರಲಿ

ಕರಿದ-ಹುರಿದ ಆಹಾರಗಳ‌
ಸೇವನೆಗೆ ಮಿತಿಯು ಇರಲಿ
ಹಣ್ಣು, ಸಿರಿಧಾನ್ಯಗಳು
ಇರಲಿ ಪಾಲು ಆಹಾರದಲಿ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆನೆ ಮತ್ತು ಹಕ್ಕಿ

ಪಾಪು ಮತ್ತು ಕನ್ನಡಿ

ಚಂದಿರ