ಹಲಸಿನ ಹಣ್ಣು
ಮಶೀರ್ಷಿಕೆ : ಹಲಸಿನ ಹಣ್ಣು
ಪೇಟೆಯ ವಾಸದ ಮಗುವೊಂದು
ಬೇಸಿಗೆ ರಜೆಯ ಕಳೆಯಲೆಂದು
ಹಳ್ಳಿಯ ಅಜ್ಜಿ ಮನೆಗೆ ಬಂದಿತು
ದೊಡ್ಡ ಹಲಸಿನ ಹಣ್ಣು ಕಂಡಿತು
ಘಮಘಮ ಪರಿಮಳಕೆ ಸೋತು
ಲಘುಬಗೆಯಲಿ ತಿನ್ನ ಬಯಸಿತು
ಅಜ್ಜಿ ಬಿಡಿಸಿಟ್ಟ ತೊಳೆಯ ನೋಡಿತು
ಬೇಗನೇ ಗುಳುಂ ಎಂದು ನುಂಗಿತು
ಗಂಟಲಲ್ಲಿ ತೊಳೆಯು ಸಿಕ್ಕಿಕೊಂಡಿತು
ಕಣ್ಣಿನಲ್ಲಿ ನೀರು ಬಳಬಳ ಹರಿಯಿತು
ಅಜ್ಜಿಯಿಂದ ಎಲ್ಲವೂ ಸರಿಯಾಯಿತು
ಹೊಟ್ಟೆ ತುಂಬ ಮಗು ಹಣ್ಣು ತಿಂದಿತು
ವೇದಾವತಿ ಭಟ್ಟ
ಮುಂಬೈ
ಪೇಟೆಯ ವಾಸದ ಮಗುವೊಂದು
ಬೇಸಿಗೆ ರಜೆಯ ಕಳೆಯಲೆಂದು
ಹಳ್ಳಿಯ ಅಜ್ಜಿ ಮನೆಗೆ ಬಂದಿತು
ದೊಡ್ಡ ಹಲಸಿನ ಹಣ್ಣು ಕಂಡಿತು
ಘಮಘಮ ಪರಿಮಳಕೆ ಸೋತು
ಲಘುಬಗೆಯಲಿ ತಿನ್ನ ಬಯಸಿತು
ಅಜ್ಜಿ ಬಿಡಿಸಿಟ್ಟ ತೊಳೆಯ ನೋಡಿತು
ಬೇಗನೇ ಗುಳುಂ ಎಂದು ನುಂಗಿತು
ಗಂಟಲಲ್ಲಿ ತೊಳೆಯು ಸಿಕ್ಕಿಕೊಂಡಿತು
ಕಣ್ಣಿನಲ್ಲಿ ನೀರು ಬಳಬಳ ಹರಿಯಿತು
ಅಜ್ಜಿಯಿಂದ ಎಲ್ಲವೂ ಸರಿಯಾಯಿತು
ಹೊಟ್ಟೆ ತುಂಬ ಮಗು ಹಣ್ಣು ತಿಂದಿತು
ವೇದಾವತಿ ಭಟ್ಟ
ಮುಂಬೈ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ