ಪರಿಸರ
ಸುತ್ತಲಿಹುದು ಹಸಿರು ಕಾಡು
ಜುಳುಜುಳು ಹರಿವ ಝರಿಯು
ಬಣ್ಣ ಬಣ್ಣದ ಹಕ್ಕಿಯ ನೋಡು
ಪರಿಸರದ ಸೊಬಗ ಸಿರಿಯು
ಅಲ್ಲಿದೆ ಪರಿಮಳದ ಹೂಬನ
ಅದೋ ಬಂತು ಚಿಟ್ಟೆ ನೋಡು
ಅಲ್ಲಿಹುದು ಹಣ್ಣ ಮರದ ವನ
ಸಿಹಿಯ ಹಣ್ಣ ಕೊಯ್ಯಲು ಓಡು
ರವಿಯ ಹೊನ್ನು ಕಿರಣದಿಂದ
ಕರಗುವುದು ಇಬ್ಬನಿಯ ಸಾಲು
ತುಂತುರು ಮಳೆ ಹನಿಯಿಂದ
ಹುಟ್ಟಿತು ಹಸಿರು ಹುಲ್ಲ ಸಾಲು
ಸೊಬಗಿನ ತವರು ಈ ಪ್ರಕೃತಿ
ಓಡಿಸುವುದು ಮನದ ಬೇಸರ
ಮಾಡಿಡಬೇಡಿ ಎಂದೂ ವಿಕೃತಿ
ಎಂದೆಂದಿಗೂ ಇರಲಿ ಸುಂದರ
ವೇದಾವತಿ ಭಟ್ಟ
ಮುಂಬೈ
ಗೃಹಿಣಿ
ಜುಳುಜುಳು ಹರಿವ ಝರಿಯು
ಬಣ್ಣ ಬಣ್ಣದ ಹಕ್ಕಿಯ ನೋಡು
ಪರಿಸರದ ಸೊಬಗ ಸಿರಿಯು
ಅಲ್ಲಿದೆ ಪರಿಮಳದ ಹೂಬನ
ಅದೋ ಬಂತು ಚಿಟ್ಟೆ ನೋಡು
ಅಲ್ಲಿಹುದು ಹಣ್ಣ ಮರದ ವನ
ಸಿಹಿಯ ಹಣ್ಣ ಕೊಯ್ಯಲು ಓಡು
ರವಿಯ ಹೊನ್ನು ಕಿರಣದಿಂದ
ಕರಗುವುದು ಇಬ್ಬನಿಯ ಸಾಲು
ತುಂತುರು ಮಳೆ ಹನಿಯಿಂದ
ಹುಟ್ಟಿತು ಹಸಿರು ಹುಲ್ಲ ಸಾಲು
ಸೊಬಗಿನ ತವರು ಈ ಪ್ರಕೃತಿ
ಓಡಿಸುವುದು ಮನದ ಬೇಸರ
ಮಾಡಿಡಬೇಡಿ ಎಂದೂ ವಿಕೃತಿ
ಎಂದೆಂದಿಗೂ ಇರಲಿ ಸುಂದರ
ವೇದಾವತಿ ಭಟ್ಟ
ಮುಂಬೈ
ಗೃಹಿಣಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ