ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಪುಟ್ಟ ಮಗುವೇ

ಓ ನನ್ನ ಪುಟ್ಟ ಮಗುವೇ ನನ್ನ ಬಾಳ ನಗುವೇ ಒಮ್ಮೆ ಇಲ್ಲಿ ಬಂದು ನೋಡು ಇಲ್ಲಿದೆ ಪುಟ್ಟ ಹಕ್ಕಿ ಗೂಡು ಇಹುದು ಎರಡು ಮರಿಗಳು ಎಷ್ಟು ಸುಂದರ ಅವುಗಳು ಕೆಂಪು ಕೊಕ್ಕು ಬಹಳ ಸುಂದರ ಮೈಯು ಬಣ್ಣದ ಗರಿಯ ಹಂದರ ತಾಯಿ ತರುವ ಗುಟುಕಿಗಾಗಿ ಚಿಂವ್ ಚಿಂವ್ ಎಂದು ಕೂಗಿ ಕಾದು ಕುಳಿತಿಹವು ನೋಡು ಎಷ್ಟು ಚಂದ ಕಣ್ಣುಗಳೆರಡು ವೇದಾವತಿ ಭಟ್ಟ