ನನ್ನ ಮನೆ
ಅಪ್ಪ ಅಮ್ಮ ಇರುವ ಮನೆ ಕೆಂಪು ಹೆಂಚಿನ ಚಂದ ಮನೆ ನಾನು ಆಡಿ ಕುಣಿವ ಮನೆ ಕುಂಟೆ-ಬಿಲ್ಲೆ ಆಡುವ ಮನೆ ದೊಡ್ಡ ಅಂಗಳ ಇರುವ ಮನೆ ಬಣ್ಣ ಬಣ್ಣದ ಹೂವಿರುವ ಮನೆ ಚಂದಮಾಮ ಬರುವ ಮನೆ ಹಸಿರು ಗಿಳಿ ಹಾರುವ ಮನೆ ನಾಯಿ ಮರಿ ಇರುವ ಮನೆ ಗೌರಿ ಹಸು ಕರೆವ ಮನೆ ಮುದ್ದಿನ ಬೆಕ್ಕು ಇರುವ ಮನೆ ಇದುವೆ ಚಂದದ ನನ್ನ ಮನೆ